ಸಾಹಿತ್ಯ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ. ಒಬ್ಬ ನೈಜ ಸಾಹಿತ್ಯ ಪ್ರೇಮಿ ಪ್ರಕೃತಿಯನ್ನು ಪ್ರೀತಿಸದೆ ಇರಲಾರ. ಇದಕ್ಕೆ ಅತ್ಯುತ್ತಮ ಮತ್ತು ಜೀವಂತ ಉದಾಹರಣೆಯೆಂದರೆ ಕಾಸರಗೋಡಿನ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರತ್ನಾಕರ ಮಲ್ಲಮೂಲೆ ಮತ್ತು ಅವರ ಪತ್ನಿ ಸುನೀತಾ ಯಾದವ್ ಅವರ ಬದುಕು. ಕಾಂಕ್ರೀಟ್ ಕಾಡುಗಳೇ ವಿಜೃಂಭಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಪರಿಸರದೊಂದಿಗೆ ಹೇಗೆ ಸಹಜೀವನ ನಡೆಸಬಹುದು ಎಂಬುದನ್ನು ಇವರು ತಮ್ಮ 'ಬನವಾಸಿ' ಮನೆಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ೧. ಗಡಿನಾಡಿನಲ್ಲಿ ಕನ್ನಡದ ಕಂಪು ಮತ್ತು ವೃತ್ತಿ ಬದುಕು ಕೇರಳ ಮತ್ತು ಕರ್ನಾಟಕದ ಗಡಿಭಾಗವಾದ ಕಾಸರಗೋಡು ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಬೀಡು. ಇಲ್ಲಿನ ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರತ್ನಾಕರ ಮಲ್ಲಮೂಲೆ ಅವರು ಕೇವಲ ತರಗತಿಯ ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವ ಅಧ್ಯಾಪಕರಲ್ಲ. ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವಂತೆಯೇ, ನೆಲ-ಜಲ ಮತ್ತು ಪರಿಸರದ ಉಳಿವಿಗಾಗಿಯೂ ನಿರಂತರವಾಗಿ ದುಡಿಯುತ್ತಿರುವ ಅಪ್ಪಟ ಪರಿಸರವಾದಿ. ಅವರ ಈ ಪಯಣದಲ್ಲಿ ಅವರ ಪತ್ನಿ ಸುನೀತಾ ಯಾದವ್ ಅವರ ಪಾಲು ಮತ್ತು ಬೆಂಬಲ ಅಪಾರವಾದದ್ದು ೨. 'ಬನವಾಸಿ' - ಕೇವಲ ಮನೆಯಲ್ಲ, ಪ್ರಕೃತಿಯ ದೇಗುಲ ಡಾ. ರತ್ನಾಕರ ದಂಪತಿ ಕೇರಳದ ನಿರ್ಚಾಲಿನಲ್ಲಿ...
💸 UPI ಮೂಲಕ ₹10 ಪಾವತಿಸಿದರೂ ಯಾರಿಗಾದರೂ Charge ಆಗುತ್ತದೆಯೇ? UPI Transaction Charges ನಿಜವಾದ ಕಥೆ ಇದೇ! “ನಾನು UPI ಮೂಲಕ ₹500 ಪಾವತಿಸಿದೆ. ನನ್ನಿಂದ ಯಾವುದೇ Charge ತೆಗೆದುಕೊಳ್ಳಲಿಲ್ಲ. ಹಾಗಾದರೆ ಈ ಹಣ ವರ್ಗಾವಣೆಯ ಖರ್ಚನ್ನು ಯಾರು ಭರಿಸುತ್ತಾರೆ?” ಇದು ಬಹಳ ಜನರಿಗೆ ಕುತೂಹಲ ಮೂಡಿಸುವ ಪ್ರಶ್ನೆ. ಇಂದು ಚಹಾ ಅಂಗಡಿಯಿಂದ ದೊಡ್ಡ Shopping Mall ವರೆಗೆ, ₹10 ರಿಂದ ಸಾವಿರಾರು ರೂಪಾಯಿಗಳವರೆಗೆ UPI ಮೂಲಕ ಪಾವತಿ ಮಾಡುವುದು ಸಾಮಾನ್ಯವಾಗಿದೆ. ಆದರೆ UPI Payment ಸಂಪೂರ್ಣವಾಗಿ “Charge Free” ಆಗಿದೆಯೇ? ಅಥವಾ ಇದರ ಹಿಂದೆ ಬೇರೆ ರೀತಿಯ ಶುಲ್ಕ ವ್ಯವಸ್ಥೆ ಇದೆಯೇ? ಈ ಲೇಖನದಲ್ಲಿ UPI Transaction Charges ಯಾರಿಗೆ ಅನ್ವಯಿಸುತ್ತವೆ, ಯಾರಿಗೆ ಅನ್ವಯಿಸುವುದಿಲ್ಲ, ಯಾವ ರೀತಿಯ UPI ಪಾವತಿಯಲ್ಲಿ ಶುಲ್ಕದ ವ್ಯವಸ್ಥೆ ಇರಬಹುದು, ಅದರ ಪ್ರಯೋಜನಗಳು ಮತ್ತು ಸಮಸ್ಯೆಗಳು ಏನು ಎಂಬುದನ್ನು ಸರಳವಾಗಿ ನೋಡೋಣ. 🏦 ಮೊದಲು ತಿಳಿದುಕೊಳ್ಳಬೇಕಾದದ್ದು: ಸಾಮಾನ್ಯ UPI Payment ಗೆ Charge ಇದೆಯೇ? ನೀವು ನಿಮ್ಮ Bank Account ಅನ್ನು UPI App ಗೆ link ಮಾಡಿ , ಮತ್ತೊಬ್ಬ ವ್ಯಕ್ತಿಯ Bank Account ಗೆ ಹಣ ಕಳುಹಿಸಿದರೆ, ಸಾಮಾನ್ಯವಾಗಿ ಆ Bank Account-to-Bank Account UPI transaction ಗ್ರಾಹಕರಿಗೆ ಉಚಿತವಾಗಿದೆ . NPCI ಕೂಡ Bank Account ಆಧಾರಿತ UPI transactions ಗ್ರಾಹಕರು ಮತ್ತು ವ್ಯಾಪಾರಿಗಳ...
ನಮಗೆಲ್ಲರಿಗೂ ನಮ್ಮ ಬಾಲ್ಯದ ಒಂದು ಸಾಮಾನ್ಯ ನೆನಪು ಇದ್ದೇ ಇರುತ್ತದೆ. ಮೃಗಾಲಯದಲ್ಲಿ ದೊಡ್ಡ ಕಬ್ಬಿಣದ ಪಂಜರದ ಹೊರಗೆ ನಿಂತು, ಕಡಲೆಕಾಯಿ ತಿನ್ನುತ್ತಾ, ಪಂಜರದೊಳಗಿದ್ದ ಕೋತಿಗಳನ್ನು ನೋಡಿ ನಕ್ಕು ಮಜಾ ಮಾಡುತ್ತಿದ್ದೆವು. ಆದರೆ ಈಗಿನ ಬೆಂಗಳೂರಿನ ಪರಿಸ್ಥಿತಿ ನೋಡಿದರೆ, ಆ ಹಳೆಯ ಕಥೆ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಈಗ ಕೋತಿಗಳು ನಮ್ಮ ಬಾಲ್ಕನಿಯ ಗೋಡೆಗಳ ಮೇಲೆ ರಾಜಾರೋಷವಾಗಿ ಕುಳಿತು, ನಾವೇ ತಂದಿಟ್ಟ ಹಣ್ಣುಗಳನ್ನು ಕದ್ದು ತಿನ್ನುತ್ತಾ ಮಜಾ ಮಾಡುತ್ತಿವೆ. ನಾವಾದರೋ ನಮ್ಮದೇ ಮನೆಗಳಲ್ಲಿ ದಪ್ಪಗಿನ ಕಬ್ಬಿಣದ ಜಾಲರಿಗಳ (Net/Mesh) ಒಳಗೆ ಬಂಧಿಯಾಗಿ, ಆ ಕೋತಿಗಳನ್ನು ಹತಾಶೆಯಿಂದ ನೋಡುತ್ತಿದ್ದೇವೆ. ಇದೇ ಅಲ್ವಾ ಅಸಲಿ 'ವೈಸ್ ವರ್ಸಾ'! ಮನುಷ್ಯ ತಾನೇ ಸೃಷ್ಟಿಸಿದ ಕಾಂಕ್ರೀಟ್ ಕಾಡಿನಲ್ಲಿ, ತನಗೇ ಒಂದು ಪಂಜರ ನಿರ್ಮಿಸಿಕೊಂಡು ಬಂಧಿಯಾಗಿದ್ದಾನೆ. ಆಧುನಿಕ ಅಪಾರ್ಟ್ಮೆಂಟ್ ಜೀವನ ಎಂಬ ಭದ್ರಕೋಟೆ ಬೆಂಗಳೂರಿನಲ್ಲಿ ಈಗೊಂದು ಬಾಡಿಗೆ ಮನೆಗೆ ಹೋಗುವುದು ಎಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಸಾವಿರಾರು ರೂಪಾಯಿ ಬಾಡಿಗೆ, ಲಕ್ಷಗಟ್ಟಲೆ ಅಡ್ವಾನ್ಸ್ ಕೊಡುವುದು ಮಾತ್ರವಲ್ಲ, ಮನೆಗೆ ಹೋದ ತಕ್ಷಣ ಭದ್ರಕೋಟೆ ಕಟ್ಟುವ ಕೆಲಸ ಶುರುವಾಗುತ್ತದೆ. ಪ್ರತಿಯೊಂದು ಕಿಟಕಿ, ಬಾಲ್ಕನಿಗೂ ದಪ್ಪಗಿನ ನೈಲಾನ್ ನೆಟ್ ಅಥವಾ ಕಬ್ಬಿಣದ ಜಾಲರಿ (ಮಂಕಿ ಮೆಶ್) ಹಾಕಿಸುವುದು ಈಗ ಕಡ್ಡಾಯ. "ಓಪನ್ ವ್ಯೂ" ಮತ್ತು "ನ್ಯಾಚುರಲ್ ವಾತಾವ...
Comments
Post a Comment
Please write your comments, suggestions and feedback.