ನಮಗೆಲ್ಲರಿಗೂ ನಮ್ಮ ಬಾಲ್ಯದ ಒಂದು ಸಾಮಾನ್ಯ ನೆನಪು ಇದ್ದೇ ಇರುತ್ತದೆ. ಮೃಗಾಲಯದಲ್ಲಿ ದೊಡ್ಡ ಕಬ್ಬಿಣದ ಪಂಜರದ ಹೊರಗೆ ನಿಂತು, ಕಡಲೆಕಾಯಿ ತಿನ್ನುತ್ತಾ, ಪಂಜರದೊಳಗಿದ್ದ ಕೋತಿಗಳನ್ನು ನೋಡಿ ನಕ್ಕು ಮಜಾ ಮಾಡುತ್ತಿದ್ದೆವು. ಆದರೆ ಈಗಿನ ಬೆಂಗಳೂರಿನ ಪರಿಸ್ಥಿತಿ ನೋಡಿದರೆ, ಆ ಹಳೆಯ ಕಥೆ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಈಗ ಕೋತಿಗಳು ನಮ್ಮ ಬಾಲ್ಕನಿಯ ಗೋಡೆಗಳ ಮೇಲೆ ರಾಜಾರೋಷವಾಗಿ ಕುಳಿತು, ನಾವೇ ತಂದಿಟ್ಟ ಹಣ್ಣುಗಳನ್ನು ಕದ್ದು ತಿನ್ನುತ್ತಾ ಮಜಾ ಮಾಡುತ್ತಿವೆ. ನಾವಾದರೋ ನಮ್ಮದೇ ಮನೆಗಳಲ್ಲಿ ದಪ್ಪಗಿನ ಕಬ್ಬಿಣದ ಜಾಲರಿಗಳ (Net/Mesh) ಒಳಗೆ ಬಂಧಿಯಾಗಿ, ಆ ಕೋತಿಗಳನ್ನು ಹತಾಶೆಯಿಂದ ನೋಡುತ್ತಿದ್ದೇವೆ. ಇದೇ ಅಲ್ವಾ ಅಸಲಿ 'ವೈಸ್ ವರ್ಸಾ'! ಮನುಷ್ಯ ತಾನೇ ಸೃಷ್ಟಿಸಿದ ಕಾಂಕ್ರೀಟ್ ಕಾಡಿನಲ್ಲಿ, ತನಗೇ ಒಂದು ಪಂಜರ ನಿರ್ಮಿಸಿಕೊಂಡು ಬಂಧಿಯಾಗಿದ್ದಾನೆ. ಆಧುನಿಕ ಅಪಾರ್ಟ್ಮೆಂಟ್ ಜೀವನ ಎಂಬ ಭದ್ರಕೋಟೆ ಬೆಂಗಳೂರಿನಲ್ಲಿ ಈಗೊಂದು ಬಾಡಿಗೆ ಮನೆಗೆ ಹೋಗುವುದು ಎಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಸಾವಿರಾರು ರೂಪಾಯಿ ಬಾಡಿಗೆ, ಲಕ್ಷಗಟ್ಟಲೆ ಅಡ್ವಾನ್ಸ್ ಕೊಡುವುದು ಮಾತ್ರವಲ್ಲ, ಮನೆಗೆ ಹೋದ ತಕ್ಷಣ ಭದ್ರಕೋಟೆ ಕಟ್ಟುವ ಕೆಲಸ ಶುರುವಾಗುತ್ತದೆ. ಪ್ರತಿಯೊಂದು ಕಿಟಕಿ, ಬಾಲ್ಕನಿಗೂ ದಪ್ಪಗಿನ ನೈಲಾನ್ ನೆಟ್ ಅಥವಾ ಕಬ್ಬಿಣದ ಜಾಲರಿ (ಮಂಕಿ ಮೆಶ್) ಹಾಕಿಸುವುದು ಈಗ ಕಡ್ಡಾಯ. "ಓಪನ್ ವ್ಯೂ" ಮತ್ತು "ನ್ಯಾಚುರಲ್ ವಾತಾವ...
Comments
Post a Comment
Please write your comments, suggestions and feedback.